Download
the kannada
font
 
   £ÀªÀÄä §UÉΠ    G¥ÀAiÀÄÄPÀÛ ¸ÀÆZÀ£ÉUÀ¼ÀÄ     ¥ÀzÉà ¥ÀzÉà PÉüÀ¯ÁUÀĪÀ ¥Àæ±ÉßUÀ¼ÀÄ     ºÀtPÁ¸ÀÄ ²PÀët     zÀÆgÀÄUÀ¼ÀÄ   EvÀgÉ ¸ÀA¥ÀPÀðUÀ¼ÀÄ 
ºÉÆÃA >> C¢ü¸ÀÆZÀ£ÉUÀ¼ÀÄ - Display
Note : To obtain an aligned printout please download the (146.00 kb ) version to your machine and then use respective software to print the story.
Date: 27/08/2015
ಪಿಓಎಸ್ ಗಳಲ್ಲಿ ಹಣ ತೆಗೆಯುವಿಕೆ – ಮೂರು ಮತ್ತು ನಾಲ್ಕನೇ ದರ್ಜೆಯ ಕೇಂದ್ರಗಳಲ್ಲಿ ಮಿತಿ ಏರಿಕೆ

ಆರ್ ಬಿ ಐ 2015-16/164
ಡಿ ಬಿ ಎಸ್ ಎಸ್/ ಸಿ.ಓ.ಪಿಡಿ.ಸಂ.449/02.14.003/2015-16

ಆಗಸ್ಟ್ 27, 2015

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳೂ ಸೇರಿದಂತೆ ಎಲ್ಲ ಪೌರ ಸಹಕಾರಿ ಬ್ಯಾಂಕುಗಳು/ರಾಜ್ಯ ಸಹಕಾರಿ ಬ್ಯಾಂಕುಗಳು/
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು/ ಕಾರ್ಡು ಸಂಪರ್ಕ ಜಾಲ ಒದಗಿಸುವ ಸಂಸ್ಥೆಗಳು ಹಾಗೂ ಎಲ್ಲಾ ಅನುಸೂಚಿತ ವಾಣಿಜ್ಯ ಬ್ಯಾಂಕುಗಳ ಅಧ್ಯಕ್ಷರು/
ಕಾರ್ಯನಿರ್ವಾಹಕ ನಿರ್ದೇಶಕರು/ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು

ಮಾನ್ಯರೇ,

ಪಿಓಎಸ್ ಗಳಲ್ಲಿ ಹಣ ತೆಗೆಯುವಿಕೆ – ಮೂರು ಮತ್ತು ನಾಲ್ಕನೇ ದರ್ಜೆಯ ಕೇಂದ್ರಗಳಲ್ಲಿ ಮಿತಿ ಏರಿಕೆ

ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳು ನೀಡಿದ ಎಲ್ಲಾ ಡೆಬಿಟ್ ಕಾರ್ಡುಗಳು ಹಾಗೂ ಎಲ್ಲೆಡೆ ಉಪಯೋಗಿಸಬಹುದಾದ ಪೂರ್ವ ಪಾವತಿ ಕಾರ್ಡುಗಳ ಮೂಲಕ “ಪಿಓಎಸ್” ಗಳಲ್ಲಿ ದಿನವೊಂದಕ್ಕೆ ರೂ. 1000 ದಷ್ಟು ನಗದು ತೆಗೆದುಕೊಳ್ಳಬಹುದೆಂದು ಸೂಚಿಸಿರುವ ನಮ್ಮ ಸುತ್ತೋಲೆ ಸಂಖ್ಯೆ ಡಿಪಿಎಸೆಸ್.ಸಿಓ.ಪಿಡಿ.ಸಂ.147/02.14.003/2009-10 ದಿನಾಂಕ ಜುಲೈ 22, 2009 ಮತ್ತು ಡಿಪಿ.ಎಸ್ ಎಸ್.ಸಿಓ.ಪಿಡಿ ಸಂ.563/02.14.003/2013-14 ದಿನಾಂಕ ಸೆಪ್ಟಂಬರ್ 5, 2015 ಗಳತ್ತ ತಮ್ಮ ಗಮನ ಸೆಳೆಯಲಾಗಿದೆ.

2. ಇದರ ಪುನರ್ ವಿಮರ್ಶೆಯಲ್ಲಿ ಬ್ಯಾಂಕುಗಳು ನೀಡಿದ ಎಲ್ಲಾ ಡೆಬಿಟ್ ಕಾರ್ಡುಗಳು ಹಾಗೂ ಎಲ್ಲೆಡೆ ಉಪಯೊಗಿಸಬಹುದಾದ ಪೂರ್ವ ಪಾವತಿ ಕಾರ್ಡುಗಳ ಮೂಲಕ “ಪಿಓಎಸ್” ಗಳಲ್ಲಿ ದಿನವೊಂದಕ್ಕೆ ತೆಗೆಯಬಹುದಾದ ಹಣದ ಮಿತಿಯನ್ನು, ಮೂರು ಮತ್ತು ನಾಲ್ಕನೇ ದರ್ಜೆಯ ಕೇಂದ್ರಗಳಲ್ಲಿ ರೂ.1000 ದಿಂದ ರೂ.2000ಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಏರಿಸಲಾಗಿದೆ. ಒಂದು ಮತ್ತು ಎರಡನೇ ದರ್ಜೆಯ ಕೇಂದ್ರಗಳಲ್ಲಿ ಇರುವ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

3. ಎಲ್ಲಾ ಕೇಂದ್ರಗಳಲ್ಲಿ, ಮಿತಿ ರೂ.1000/2000 ಯಾವುದೇ ಇರಲಿ, ನಗದು ತೆಗೆಯುವುದಕ್ಕೆ, ಗ್ರಾಹಕ ಶುಲ್ಕವೇನಾದರು ಇದ್ದಲ್ಲಿ, ಅದು ವ್ಯವಹರಿಸಿದ ಮೊತ್ತದ ಶೇ 1 ಕ್ಕಿಂತ ಮೀರಬಾರದು.

4. ಈ ಕೆಳಕಂಡ ಷರತ್ತುಗಳಿಗೊಳಪಟ್ಟು, ಬ್ಯಾಂಕುಗಳು ಮೇಲೆ ತಿಳಿಸಿದ ನಗದು ತೆಗೆಯುವ ಸೌಲಭ್ಯವನ್ನು ಕಲ್ಪಿಸಬಹದು.

i. ಬ್ಯಾಂಕುಗಳು ಎಚ್ಚರಿಕೆಯಿಂದ ಆಯ್ಕೆ ಮಾಡಿ, ನಿರ್ಧಿಷ್ಟಪಡಿಸಿದ ವ್ಯಾಪಾರ ಸಂಸ್ಥೆಗಳಲ್ಲಿ ಈ ಸೌಲಭ್ಯ ದೊರೆಯುತ್ತದೆ. ಅಂತಹ ಸಂಸ್ಥೆಗಳು ಈ ಸೌಲಭ್ಯ ದೊರಕುವ ಬಗ್ಗೆ ಹಾಗೂ ಇದಕ್ಕೆ ತಗಲುವ ಶುಲ್ಕವಿದ್ದಲ್ಲಿ, ಅದರ ಬಗ್ಗೆ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಸಬೇಕು/ಪ್ರದರ್ಶಿಸಬೇಕು.

ii. ಕಾರ್ಡುದಾರರು ವಸ್ತುಗಳನ್ನು ಕೊಳ್ಳಲಿ ಅಥವಾ ಕೊಳ್ಳದಿರಲಿ, ಈ ಸೌಲಭ್ಯವನ್ನು ಪಡೆಯಬಹುದಾಗಿದೆ. . ಒಂದು ವೇಳೆ ವಸ್ತುಗಳನ್ನು ಕೊಂಡಾಗ ಈ ಸೌಲಭ್ಯವನ್ನು ಉಪಯೋಗಿಸಿಕೊಂಡರೆ, ಪಿಓಎಸ್ ಗಳಲ್ಲಿ ಹಣ ತೆಗೆದುಕೊಂಡ ಬಗ್ಗೆ ಬಿಲ್ಲಿನಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು.

iii. ಈ ಸೌಲಭ್ಯವನ್ನು ನೀಡುವ ಬ್ಯಾಂಕುಗಳು, ಗ್ರಾಹಕರ ದೂರುಗಳ ನಿವಾರಣೆ ಬಗ್ಗೆ ಪರಿಣಾಮಕಾರಿ ವ್ಯವಸ್ಥೆಯನ್ನು ಹೊಂದಿರಬೇಕು. ಈ ಸಂಬಂಧ ಬರುವ ದೂರುಗಳು ಬ್ಯಾಂಕಿಂಗ್ ಲೋಕಪಾಲರ ಯೋಜನೆಯಡಿ ಬರುತ್ತವೆ.

5. ಕಾರ್ಡು ನೀಡಿದ ಬ್ಯಾಂಕುಗಳು ತಾವು ನೀಡಿರುವ ಈ ಸೌಲಭ್ಯದ ಬಗ್ಗೆ ತಮ್ಮ ಗ್ರಾಹಕರಿಗೆ ಸಾಕಷ್ಟು ಅರಿವು ಮೂಡಿಸಬೇಕು

6. ಹಣ ತೆಗೆದ ಬಗ್ಗೆ ದತ್ತಾಂಶವನ್ನು ತ್ರೈಮಾಸಿಕವಾಗಿ, ತ್ರೈಮಾಸಿಕದ ಅವಧಿ ಮುಗಿದ 15 ದಿವಸಗಳ ಒಳಗೆ ಪ್ರಧಾನ ಮುಖ್ಯ ಮಹಾ ವ್ಯವಸ್ಥಾಪಕರು, ಪಾವತಿ ಮತ್ತು ಇತ್ಯರ್ಥ ಇಲಾಖೆ, ಮುಂಬೈ-400001- ಇವರಿಗೆ ಕಳುಹಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ.

7. ಇ-ಪಾವತಿ ಮತ್ತು ಸಂಬಂಧಿತ ಇತರೇ ಬೆಳವಣಿಗೆಗಳ ಆಧಾರದ ಮೇಲೆ ಈ ವ್ಯವಸ್ಥೆಯ ಪುನರ್ ವಿಮರ್ಶೆ ಮಾಡಲಾಗುವುದು.

8. ಪಾವತಿ ಮತ್ತು ಇತ್ಯರ್ಥ ಅಧಿನಿಯಮ 2007 (2007ರ ಅಧಿನಿಯಮ 51) ರ ಪ್ರಕರಣ 18 ರ ಜೊತೆ ಓದಿಕೊಂಡಂತಹ ಪ್ರಕರಣ 10(2) ರ ಅಡಿಯಲ್ಲಿ ಈ ನಿರ್ದೇಶನ ನೀಡಲಾಗಿದೆ.

ತಮ್ಮ ವಿಶ್ವಾಸಿ,

(ನಂದಾ ಎಸ್ ದಾವೆ)
ಮುಖ್ಯ ಮಹಾ ವ್ಯವಸ್ಥಾಪಕರು


ಅನುಬಂಧ

’ಪಿಓಎಸ್” ಗಳಲ್ಲಿ ತೆಗೆದ ಹಣದ ಬಗ್ಗೆ ತ್ರೈಮಾಸಿಕ ವರದಿ
ಡಿ ಪಿಎ ಸ್ ಎಸ್.ಪಿಡಿ.ಸಂ./449/02.14.003/2015-16 ಆಗಸ್ಟ್, 27, 2015

ಬ್ಯಾಂಕಿನ ಹೆಸರು

ತ್ರೈಮಾಸಿಕ ಕೊನೆ

ಕೇಂದ್ರ ನಗದು ತೆಗೆಯುವ ಸೌಲಭ್ಯವಿರುವ ವ್ಯಾಪರ ಕೇಂದ್ರಗಳ ಸಂಖ್ಯೆ (ಸಂಚಿತ) (ಆನ್-ಯುಎಸ್) (ಆಫ್-ಯುಎಸ್)
ತ್ರೈಮಾಸಿಕದಲ್ಲಿ ವ್ಯವಹಾರ ಪ್ರಮಾಣ ತ್ರೈಮಾಸಿಕದಲ್ಲಿ ವ್ಯವಹಾರ ಮೊತ್ತ
(ರೂ.ಗಳಲ್ಲಿ)
ತ್ರೈಮಾಸಿಕದಲ್ಲಿ ವ್ಯವಹಾರ ಪ್ರಮಾಣ ತ್ರೈಮಾಸಿಕದಲ್ಲಿ ವ್ಯವಹಾರ ಮೊತ್ತ
(ರೂ.ಗಳಲ್ಲಿ)
ದರ್ಜೆ-1          
ದರ್ಜೆ-2          
ದರ್ಜೆ-3          
ದರ್ಜೆ-4          
ದರ್ಜೆ-5          
ದರ್ಜೆ-6          
ಒಟ್ಟು          
 
  ¨sÁ.j ¨ÁåAPï ºÀPÀÄÌUÀ¼À£ÀÄß PÁ¬ÄÝj¸À¯ÁVzÉ÷

¸ÀÆZÀ£É: L E 5 gÀ°ègÀĪÀ 1024 * 768 gÉd®Æ±À£ï ªÀÄvÀÄÛ ªÉÄîàlÖ ªÀµÀð£ï EgÀĪÀ EAl£Éðmï JPïì¥ÉÇèÃgÀgï UÀ¼À°è ¸ÀàµÀÖ ªÁV PÁt¸ÀÄvÀÛzÉ.