Download
the kannada
font
 
   £ÀªÀÄä §UÉΠ    G¥ÀAiÀÄÄPÀÛ ¸ÀÆZÀ£ÉUÀ¼ÀÄ     ¥ÀzÉà ¥ÀzÉà PÉüÀ¯ÁUÀĪÀ ¥Àæ±ÉßUÀ¼ÀÄ     ºÀtPÁ¸ÀÄ ²PÀët     zÀÆgÀÄUÀ¼ÀÄ   EvÀgÉ ¸ÀA¥ÀPÀðUÀ¼ÀÄ 
ºÉÆÃA >> C¢ü¸ÀÆZÀ£ÉUÀ¼ÀÄ - Display
Note : To obtain an aligned printout please download the (75.00 kb ) version to your machine and then use respective software to print the story.
Date: 06/10/2016
ಆದ್ಯತಾ ವಲಯದಲ್ಲಿ ಸಾಲ : ಪರಿಷ್ಕೃತ ವರದಿ ವ್ಯವಸ್ಥೆ

ಆರ್ ಬಿ ಐ/2016-2017/79
ಎಫ್ ಐ ಡಿ ಡಿ. ಸಿ ಒ.ಪ್ಲಾನ್.ಸಿ ಒ.ಬಿ ಸಿ.ಸಂಖ್ಯೆ17 /04.09.001/2016-17

ಅಕ್ಟೋಬರ್ 06, 2016

ಅಧ್ಯಕ್ಷ / ವ್ಯವಸ್ಥಾಪಕ ನಿರ್ದೇಶಕ /
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಮಾನ್ಯರೇ ,

ಆದ್ಯತಾ ವಲಯದಲ್ಲಿ ಸಾಲ : ಪರಿಷ್ಕೃತ ವರದಿ ವ್ಯವಸ್ಥೆ

ದಿನಾಂಕ ಏಪ್ರಿಲ್ 23, 2015 ರ ಸುತ್ತೋಲೆ FIDD.CO.Plan.BC.54/04.09.01/2014 ಮೂಲಕ ಆದ್ಯತಾ ವಲಯದ ಕುರಿತು ಇರುವ ಮಾರ್ಗಸೂಚಿಗಳನ್ನು ಪರಿಷ್ಕೃತ ಗೊಳಿಸಲಾಗಿದೆ. ಅದರಂತೆ , ಆದ್ಯತಾ ವಲಯದ ಸಾಲಗಳ ತ್ರೈಮಾಸಿಕ ಮತ್ತು ವಾರ್ಷಿಕ ಮೇಲ್ವಿಚಾರಣೆಯ ನಮೂನೆಯನ್ನು ದಿನಾಂಕ 11, 2015 ರ ಸುತ್ತೋಲೆ FIDD.CO. Plan.BC No. 58 /04.08.001/2014-15 ಮೂಲಕ ನೀಡಲಾಗಿದೆ.

2. ಪರಿಶೀಲನೆಯ ನಂತರ , ಆದ್ಯತ ವಲಯದ ಸಾಲಗಳ ತ್ರೈಮಾಸಿಕ ಮತ್ತು ವಾರ್ಷಿಕ ವರದಿಯ ನಮೂನೆಯನ್ನು ಮಾರ್ಪಡಿಸಲು ನಿರ್ಧರಿಸಲಾಗಿದೆ. ಆದ್ದರಿಂದ , ಅಡಕವಾಗಿರುವ ಪರಿಷ್ಕೃತ ನಮೂನೆಯಲ್ಲಿ ಆದ್ಯತಾ ವಲಯದ ಸಾಲಗಳ ವರದಿಯನ್ನು ನೀಡುವಂತೆ ಎಲ್ಲ ಬ್ಯಾಂಕುಗಳಿಗೆ ಕೋರಲಾಗಿದೆ. ಈ ಪರಿಷ್ಕೃತ ತ್ರೈಮಾಸಿಕ ಮತ್ತು ವಾರ್ಷಿಕ ವರದಿಯನ್ನು ಎಲ್ಲ ಬ್ಯಾಂಕುಗಳು ಪ್ರತಿ ತ್ರೈಮಾಸಿಕ ಮತ್ತು ಹಣಕಾಸು ವರ್ಷದ ಅಂತ್ಯವಾಗುತ್ತದೆಯಂತೆ ಕ್ರಮವಾಗಿ ಹದಿನೈದು ಹಾಗೂ ಒಂದು ತಿಂಗಳೊಳಗೆ ಭಾರತೀಯ ರಿಸರ್ವ್ ಬ್ಯಾಂಕ್ ,ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗ , ಸಂಖ್ಯಾಶಾಸ್ತ್ರ ವಿಭಾಗ , ಕೇಂದ್ರೀಯ ಇಲಾಖೆ , 3ನೇ ಮಹಡಿ , ಅಮರ್ ಬಿಲ್ಡಿಂಗ್ , ಫೋರ್ಟ್ , ಮುಂಬೈ – 400001 ಗೆ ಕಳುಹಿಸ ತಕ್ಕದ್ದು.

3. ಜೂನ್ 2016 , ಸೆಪ್ಟೆಂಬರ್ 2016 ಹಾಗೂ ಅಕ್ಟೋಬರ್ 21 ರಂದು ಅಂತ್ಯಗೊಳ್ಳುವ ತ್ರೈಮಾಸಿಕದ ವರದಿಯನ್ನು ಪರಿಷ್ಕೃತ ನಮೂನೆಯಲ್ಲಿ ನೀಡಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ.

ಇಂತಿ ವಿಶ್ವಾಸಿ

ಎ. ಉದ್ಗತ
(ಪ್ರಧಾನ ಮುಖ್ಯ ಮಹಾ ವ್ಯವಸ್ಥಾಪಕರು)

ಅಡಕ : ಮೇಲಿರುವಂತೆ

 
  ¨sÁ.j ¨ÁåAPï ºÀPÀÄÌUÀ¼À£ÀÄß PÁ¬ÄÝj¸À¯ÁVzÉ÷

¸ÀÆZÀ£É: L E 5 gÀ°ègÀĪÀ 1024 * 768 gÉd®Æ±À£ï ªÀÄvÀÄÛ ªÉÄîàlÖ ªÀµÀð£ï EgÀĪÀ EAl£Éðmï JPïì¥ÉÇèÃgÀgï UÀ¼À°è ¸ÀàµÀÖ ªÁV PÁt¸ÀÄvÀÛzÉ.